Surprise Me!

ಟಿಪ್ಪು ಜಯಂತಿ ಮಾಡೇ ಮಾಡ್ತೀವಿ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ | Oneindia Kannada

2017-10-25 44 Dailymotion

ಯಾರು ಬರಲಿ, ಬಿಡಲಿ ಟಿಪ್ಪು ಜಯಂತಿ ಮಾಡೇ ಮಾಡ್ತೀವಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಇಲ್ಲಿಯ ಬಜ್ಪೆ ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಶಿಷ್ಟಾಚಾರದ ಪ್ರಕಾರ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕ್ತೇವೆ. ಬರುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ’ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರಿಗೆ ತಿರುಗೇಟು ನೀಡಿದರು. ಕೆಜೆಪಿ ಪಕ್ಷ ಸ್ಥಾಪಿಸಿದ್ದ ಸಮಯದಲ್ಲಿ ಯಡಿಯೂರಪ್ಪ, ಟಿಪ್ಪು ವೇಷ ತೊಟ್ಟು ಪೋಜು ನೀಡಿದ್ದರು. ಆಗ ಅವರ ಜತೆ ಶೋಭಾ ಕರಂದ್ಲಾಜೆ ಕೂಡ ಇದ್ದರು. ಆದ್ರೆ ಈಗ ಮಾತ್ರ ‘ನನ್ನ ಹೆಸರು ಆಮಂತ್ರಣ ಪತ್ರಿಕೆಯಲ್ಲಿ ಬೇಡ’ ಎಂದು ಹೇಳುತ್ತಿದ್ದಾರೆ ಅಂತ ಕಿಡಿ ಕಾರಿದ್ರು..ಅಲ್ದೇ ವಿಶ್ರಾಂತ ಕುಲಪತಿ ಶೇಖ್ ಅಲಿಯವರು ಟಿಪ್ಪು ಕುರಿತು ಬರೆದ ಪುಸ್ತಕಕ್ಕೆ ಅಂದು ಜಗದೀಶ ಶೆಟ್ಟರ ಮುನ್ನುಡಿ ಬರೆದಿದ್ದರು. ಆಗ ಟಿಪ್ಪು ಸುಲ್ತಾನ್ ದೇಶಭಕ್ತ ಎಂದು ಹೊಗಳಿದ್ದ ಅವರು ಈಗ ರಾಗ ಬದಲಿಸಿದ್ದಾರೆ.. <br /> <br />Karnataka cm siddaramaiah says at mangaluru we will celebrate tippu jayanthi

Buy Now on CodeCanyon